ಹರಿಹರ
ಮನಸೊತು ಬಾಗುವೆ ತಲೆ ತಗ್ಗಿಸಿ ಶರಣಾಗುವೆ ನನ್ನನೆ ಅರ್ಪಿಸುವೆ ಹರಿ ಹರರಲ್ಲಿ ಭೇದವಿಲ್ಲ ಎಂದು ಭಾವಿಸುವೆ ಹರಿ ಇಚ್ಚಿಸಿದರೆ ಜೀವನೋದ್ಧಾರ ಹರ ಇಚ್ಚಿಸಿದರೆ ಕಾಲ !!! ಎರಡರಲ್ಲೂ ಸುಖ ಇಟ್ಟರೆಂದು ಭಾವಿಸುವೆ ಮರಣದಲ್ಲೂ ಹರಿಹರ ಎನ್ನುವೆ ಮರಣಕ್ಕಿಂತ ಶಾಂತಿ ಇಲ್ಲ ಜೀವನೋದ್ಧಾರ ಆದವರಲ್ಲಿ - ಶಾಂತಿ ನೆಮ್ಮದಿ ಎರಡರ ಕೊರತೆ ಇಲ್ಲ ಮನಸೊತು ಬಾಗುವೆ ತಲೆ ತಗ್ಗಿಸಿ ಶರಣಾಗುವೆ ನನ್ನನೆ ಅರ್ಪಿಸುವೆ ಹರಿ ಹರರಲ್ಲಿ ಭೇದವಿಲ್ಲ ಎಂದು ಭಾವಿಸುವೆ ಹರಿ ಸ್ಪೀಕರಿಸಿದ ಪ್ರಾರ್ಥನೆ ಜಗತ್ತಿಗಾಗಲಿ ಹರ ಕೊಡುವ ಕೊಡುಗೆ ನನ್ನದಾಗಲಿ !!!!